ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾ? | Azad Times

7 months ago 6
Google News-KN Google News-EN Telegram Facebook

Azad Times News Desk.

ಬೆಳಗ್ಗಿನ ಉಪಹಾರ’ ಊಟಗಳ ರಾಜ ಎಂದು ಕರೆಯಲ್ಪಡುತ್ತದೆ. ಯಾಕೆಂದರೆ ಬೆಳಗ್ಗೆ ನಾವು ತಿನ್ನುವ ಆಹಾರ ನಮ್ಮ ಪೂರ್ತಿ ದಿನಕ್ಕೆ ಬೇಕಾಗುವ ಶಕ್ತಿಯನ್ನು ನೀಡುತ್ತದೆ. ಅದಕ್ಕಾಗಿ ನಾವು ಬ್ರೇಕ್ ಫಾಸ್ಟ್ ಗೆ ಆದಷ್ಟೂ ಪೋಷಕಾಂಶಭರಿತ, ಆರೋಗ್ಯಭರಿತ ಆಹಾರವನ್ನು ಸೇವಿಸಬೇಕು. ಆದರೆ ಈಗಿನ ಒತ್ತಡದ ಬದುಕಿನಲ್ಲಿ ನಾವು ಏನೋ ಒಂದು ಹೊಟ್ಟೆಗೆ ಹಾಕಿ ಹಸಿವು ತಣಿಸುಕೊಳ್ಳುತ್ತವೆ. ಅದರಲ್ಲಿ ಸುಲಭವಾದ ತಿಂಡಿ ‘ಬಾಳೆಹಣ್ಣು’. ಯಾಕೆಂದರೆ ಇದನ್ನು ತೊಳೆಯುವ ಕಷ್ಟವೂ ಇರುವುದಿಲ್ಲ.

ಬಾಳೆಹಣ್ಣು ಪೋಷಕಾಂಶಗಳಿಂದ ಕೂಡಿದ ಹಣ್ಣು ಎಂಬುದು ನಿಜ. ಇದರಲ್ಲಿರುವ ಅಂಶಗಳು ಹೃದಯದ ಆರೋಗ್ಯವನ್ನು ಉತ್ತಮಗೊಳಿಸಿ, ನಿಶ್ಯಕ್ತಿಯನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ಬಾಳೆಹಣ್ಣು ದೇಹವನ್ನು ತಂಪಾಗಿಡುವುದರಿಂದ ಖಿನ್ನತೆ, ಮಲಬದ್ಧತೆ, ಎದೆಉರಿ ಮತ್ತು ಅಲ್ಸರ್ ನಂತಹ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ, ಇದರಲ್ಲಿ ಕಬ್ಬಿಣದಂಶ ಅಧಿಕವಾಗಿರುವುದರಿಂದ ದೇ ಹಿಮೋಗ್ಲೋಬಿನ್ ನ ಉತ್ಪತ್ತಿಗೂ ಸಹಾಯ ಮಾಡಿ ರಕ್ತಹೀನತೆಯನ್ನು ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹೌದು ಇದು ದೇಹದ ಆರೋಗ್ಯಕ್ಕೆ ಅತ್ಯುತ್ತಮವಾದ ಹಣ್ಣು, ಆದರೆ ಇದು ಖಾಲಿ ಹೊಟ್ಟೆಗೆ ದಿನದ ಮೊದಲ ಆಹಾರ ಬ್ರೇಕ್ ಫಾಸ್ಟ್ ಗೆ ಸೇವಿಸಲು ಸೂಕ್ತವೇ? ಬನ್ನಿ ತಿಳಿಯೋಣ.

ಬಾಳೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಪೊಟಾಶಿಯಮ್, ನಾರಿನಂಶ ಮತ್ತು ಮೆಗ್ನಿಶಿಯಂ ಅನ್ನು ಹೊಂದಿದೆ, ಆದ್ದರಿಂದ ಇದು ದೇಹಕ್ಕೆ ಬೇಕಾಗುವ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.ಇದು ದೇಹದ ಶಕ್ತಿಯನ್ನು ಹೆಚ್ಚಿಸಿ, ಹಸಿವನ್ನು ಇಂಗಿಸುತ್ತದೆ.ಪ್ರತಿಯೊಬ್ಬರು ದಿನಕ್ಕೆ ಒಂದು ಬಾಳೆಹಣ್ಣು ಸೇವಿಸುವುದು ಅತ್ಯಗತ್ಯ.’ ಎಂದು ನ್ಯೂಟ್ರಿಷನಿಷ್ಟ್ ಡಾ. ಶಿಲ್ಪಾ ಅರೋರ ಹೇಳುತ್ತಾರೆ. ಬಾಳೆಹಣ್ಣಿನಲ್ಲಿರುವ 25% ದಷ್ಟು ಸಕ್ಕರೆ ದೇಹಕ್ಕೆ ಅಗತ್ಯವಿರುವ ಸಕ್ಕರೆ ಅಂಶವನ್ನು ಒದಗಿಸಿ, ಶಕ್ತಿ ಯನ್ನು ಹೆಚ್ಚಿಸಿ ಇಡೀ ದಿನ ದೇಹವನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಟ್ರಿಪ್ಟೋಫಾನ್, ಕಬ್ಬಿಣ, ವಿಟಮಿನ್ ಬಿ6 ಮತ್ತಉ ವಿಟಮಿನ್ ಬಿ ಬಾಳೆಹಣ್ಣಿನಲ್ಲಿರುವ ಇತರ ಪೋಷಕಾಂಶಗಳು.

ಸಂಶೋಧನೆಗಳ ಪ್ರಕಾರ, ಇಷ್ಟೆಲ್ಲಾ ಪೋಷಕಾಂಶಗಳಿಂದ ಶ್ರೀಮಂತವಾಗಿರುವ ಬಾಳೆಹಣ್ಣು ಖಾಲಿ ಹೊಟ್ಟೆಯಲ್ಲಿ ಸೇವಿಸಲು ಸೂಕ್ತವಲ್ಲ.ಯಾಕೆಂದರೆ; ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆಯ ಅಂಶ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ, ಆದರೆ ಕೆಲವೇ ಗಂಟೆಗಳಲ್ಲಿ ಅದು ಬರಿದಾಗುತ್ತದೆ. ಬಾಳೆಹಣ್ಣು ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುತ್ತದೆ ಮತ್ತು ಸ್ವಲ್ಪ ಹೊತ್ತಿನಲ್ಲೇ ನಿದ್ದೆ ಬರುವಂತೆ ಮಾಡುತ್ತದೆ.

ಬಾಳೆಹಣ್ಣು ಆಮ್ಲೀಯ ಅಂಶವನ್ನು ಹೊಂದಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕರುಳಿನ ಸಮಸ್ಯೆಗಳು ಉಂಟಾಗಬಹುದು.
‘ಬಾಳೆಹಣ್ಣಿನಲ್ಲಿ ಆಮ್ಲೀಯ ಅಂಶಗಳು ಮತ್ತು ಪೊಟ್ಯಾಶಿಯಂ ಅಧಿಕವಾಗಿರುವುದರಿಂದ ಬೆಳಗ್ಗೆ ಸೇವಿಸುವುದು ಉತ್ತಮ ಆದರೆ ಖಾಲಿ ಹೊಟ್ಟೆಯಲ್ಲಿ ಅಲ್ಲ.

ಬಾಳೆಹಣ್ಣನ್ನು ನೆನೆಸಿದ ಒಣ ಹಣ್ಣುಗಳು, ಆ್ಯಪಲ್ ಮತ್ತು ಇತರ ಹಣ್ಣುಗಳೊಂದಿಗೆ ಸೇವಿಸುವುದರಿಂದ ಅದರ ಆಮ್ಲೀಯ ಅಂಶಗಳು ಕಡಿಮೆ ಪ್ರಮಾಣದಲ್ಲಿ ದೇಹಕ್ಕೆ ಸೇರುತ್ತದೆ.’ ಎಂದು ಬೆಂಗಳೂರಿನ ಡಾ. ಅಂಜು ಸೂದ್ ಹೇಳುತ್ತಾರೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಮೆಗ್ನೀಶಿಯಂ ಅಂಶ ರಕ್ತದಲ್ಲಿರುವ ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ನ್ನು ಅಸಮತೋಲನಗೊಳಿಸುವುದರಿಂದ ಇದು ಹೃದಯದ ರಕ್ತನಾಳದ ವ್ಯವಸ್ಥೆಯಲ್ಲಿ ತೊಂದರೆಯನ್ನುಂಟು ಮಾಡಬಹುದು.

ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಮಾತ್ರವಲ್ಲ ಯಾವುದೇ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ.ಈಗಿನ ದಿನಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹಣ್ಣುಗಳಿಗಿಂತ ಹೆಚ್ಚಾಗಿ, ಕೃತಕವಾಗಿ ಬೆಳೆಸಿದ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಹಾಗಾಗಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿವುದು ಅಪಾಯಕಾರಿ.

ಖಾಲಿ ಹೊಟ್ಟೆಗೆ ಸೂಕ್ತವೇ , ಅಲ್ಲವೇ?

ಬೇರೆ ಆಹಾರದ ಜೊತೆ ಸೇರಿಸಿಕೊಂಡು ಬಾಳೆಹಣ್ಣು ಖಾಲಿ ಹೊಟ್ಟೆಗೆ ತಿನ್ನಬಹುದು. ಇದರಿಂದ ನಿಮ್ಮ ಆರೋಗ್ಯಕರ ದಿನ ಆರಂಭವಾಗುತ್ತದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page